ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ ಜಯನಗರ, ಏಷಿಯಾದಲ್ಲಿನ ಅತಿ ದೊಡ್ಡ ಬಡಾವಣೆಗಳಲ್ಲಿ ಒಂದಾಗಿದೆ. ಜಯನಗರವು ಬಸವನಗುಡಿ, ಜೆ.ಪಿ.ನಗರ, ಬನಶಂಕರಿ ಹಾಗು ಬಿ.ಟಿ.ಎಮ್. ಬಡಾವಣೆಗಳಿಂದ ಸುತ್ತುವರಿದಿದೆ. == ಇತಿಹಾಸ == ಜಯನಗರದ ಹೆಸರು ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ ಹೆಸರಿನಿಂದ ಬಂದಿರುವುದಾಗಿ ಒಂದು ಜನೋಕ್ತಿಯಿದೆ. == ಸಂಸ್ಕೃತಿ == ಸಾಂಸ್ಕೃತಿಕವಾಗಿ ಜಯನಗರವು ಒಂದು ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದಾರೆ.ಇಲ್ಲಿ ಬಹುಮಹಡಿಯ ಕಾಂಪ್ಲೆಕ್ಸ್ ನಾಲ್ಕನೆಯ ಬ್ಲಾಕ್ ನಲ್ಲಿ ಇರುವುದರಿಂದ ಇದು ಬಹಳ ಜನಪ್ರಿಯ ಸ್ಠಳವಾಗಿದೆ. == ==